
About our online store
ಕನ್ನಡ ಸಂತೆ ಎನ್ನುವುದು ಸಮಾನಮನಸ್ಕರ ತಂಡ. ಕೃಷಿ ಪರಿವಾರದಿಂದ ಬಂದು, ಅಲ್ಲಿರುವ ಬವಣೆಗಳನ್ನು ಕಂಡು, ಮೂಲ ಉತ್ಪಾದಕನ ಕಷ್ಟಕ್ಕೆ ಧ್ವನಿ ಆಗಬೇಕೆಂದು ಹುಟ್ಟಿರುವ ಚಿಂತನೆ ಈ ಮಾರುಕಟ್ಟೆ. ನಿಮ್ಮ ಯಾವುದೇ ಉತ್ಪನ್ನಗಳನ್ನು ಪ್ರಚಾರ ಮಾಡಲು ಕನ್ನಡಿಗರೇ ಮಾಡಿರುವ ಒಂದು ಜಾಲತಾಣವಿದು. ಇಲ್ಲಿರುವ ಎಲ್ಲ ಉತ್ಪನ್ನಗಳೂ ಮೂಲ ಉತ್ಪಾದಕನ ನಿಬಂಧನೆಗಳಿಗಷ್ಟೇ ಸೀಮಿತವಾಗಿದ್ದು, ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಗ್ರಾಹಕರನ್ನು ತಲುಪಿದಲ್ಲಿ ಲಾಭದಾಯಕ ಎನ್ನುವುದು ನಮ್ಮ ಯೋಚನೆ. ವಿವಿಧ ಕಾರಣಗಳಿಗಾಗಿ ಕಂಬಾರ, ಚಮ್ಮಾರ, ನೇಕಾರ, ಕೃಷಿ ಇತರೆ ವೃತ್ತಿಗಳನ್ನು ತೊರೆದು ಉದ್ಯೋಗ ಅರಸಿ ಹೊರಟಿರುವವರಿಗೆ ಮೂಲ ನೆಲೆಯತ್ತ ಮರಳಲು ಅವಕಾಶ ಸಿಗಲಿ ಎನ್ನುವುದು ನಮ್ಮ “ಈ” ವಾಹಿನಿಯ ಉದ್ದೇಶ.
ವಿಶೇಷತೆ : ಕನ್ನಡದ ನಾಡು, ನುಡಿಗೆ ಸಂಬಂಧಿಸಿದ ಯಾವುದೇ ಉತ್ಪನ್ನಗಳಿಗೆ ನಿರ್ಬಂಧರಹಿತ, ಮುಕ್ತ ಹಾಗೂ ಶುಲ್ಕಮುಕ್ತ ಮಾರುಕಟ್ಟೆ ಒದಗಿಸುವುದು ನಮ್ಮ ಆಶಯ. ಉದಾಹರಣೆಗೆ ಕನ್ನಡದ ಪುಸ್ತಕ, ಬ್ಯಾನರ್ , ಬಂಟಿಂಗ್ಸ್ ಮೊದಲಾದವುಗಳಿಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ.